ವಿಶ್ವೇಶ್ವರಯ್ಯ ಜಲ ನಿಗಮದ ಬಗ್ಗೆ

ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತವು ಕರ್ನಾಟಕ ಸರ್ಕಾರದ ಪೂರ್ಣ ಸ್ವಾಮ್ಯ ಹೊಂದಿರುವ ನಿಗಮವನ್ನಾಗಿ 2013 ರ ಕಂಪನಿ ಕಾಯ್ದೆ ಅನ್ವಯ ವಿಶೇಷ ಉದ್ದೇಶವುಳ್ಳ ವಾಹನವನ್ನಾಗಿ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ದಾವಣಗೆರೆ, ಹಾಸನ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಬರಪೀಡಿತ ಪ್ರದೇಶಗಳ ಕುಡಿಯುವ ನೀರಿನ ಮತ್ತು ನೀರಾವರಿ ಬೇಡಿಕೆಯನ್ನು ನೀಗಿಸುವ ಸಲುವಾಗಿ ಸ್ಥಾಪಿಸಲಾಗಿದೆ

ಇನ್ನು ಓದಿ

ಯೋಜನೆಗಳು

ಕರ್ನಾಟಕದ ಪೂರ್ವ ಭಾಗದಲ್ಲಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಮಳೆಯ ವೈಪರಿತ್ಯದಿಂದಾಗಿ ಮತ್ತು ಈ ಭಾಗದ ಜನಜಾನುವಾರುಗಳಿಗೆ ಕುಡಿಯುವ ನೀರನ್ನು ಒದಗಿಸುವ ಶಾಶ್ವತ ಕುಡಿಯುವ ನೀರಿನ ಮೂಲದ ಕೊರತೆಯಿಂದಾಗಿ ಆಗಿಂದಾಗ್ಗೆ ಬರಪೀಡಿತವಾಗುತ್ತಿದೆ ಈ ಭಾಗದ ಜನರ ಬಹುದಿನಗಳ ಬೇಡಿಕೆ ಆದ ಶಾಶ್ವತ ಮತ್ತು ಅವಲಂಬಿತ ನೀರಿನ ಮೂಲವನ್ನು ಗುರುತಿಸಿ ಹಾಗೂ ಈ ಭಾಗಕ್ಕೆ ಕುಡಿಯುವ ನೀರಿನ ಒದಗಿಸುವ ಬೇಡಿಕೆಯಾಗಿದೆ. ಮುಂದುವರೆದು, ಅತಿಯಾದ ದುರ್ಬಳಕೆಯಿಂದ ಅಂತರ್‍ಜಲ ಮಟ್ಟವು ಅಪಾಯಕಾರಿ ಆಳದ ಮಟ್ಟಕ್ಕೆ ಹೋಗಿರುವ ಕಾರಣದಿಂದ ದೊರೆಯುವ ಅಂತರ್‍ಜಲವು ಹಾನಿಕಾರಕ ಫ್ಲೋರೈಡ್, ನೈಟ್ರೇಟ್ ಮುಂತಾದವುಗಳು ನಿಗದಿತ ಮಟ್ಟವನ್ನು ಮೀರಿರುತ್ತವೆ.

ಭದ್ರಾ ಮೇಲ್ದಂಡೆ ಯೋಜನೆಯು ಮಧ್ಯ ಕರ್ನಾಟಕದಲ್ಲಿ ಅನುಷ್ಠಾನಗೊಳ್ಳುತ್ತಿರುವ ಪ್ರಮುಖ ಏತ ನೀರಾವರಿ ಯೋಜನೆಯಾಗಿರುತ್ತದೆ. ಈ ಯೋಜನೆಯಡಿ ಮೊದಲಿನ ಹಂತದಲ್ಲಿ ಕೃಷ್ಣಾ ಜಲಾನಯನ ಪ್ರದೇಶದ ತುಂಗಭದ್ರಾ ಉಪ ಜಲಾನಯನದ ಪ್ರದೇಶದಲ್ಲಿನ ತುಂಗಾ ನದಿಯಿಂದ ನೀರನ್ನು ಎತ್ತಿ ಭದ್ರಾ ಜಲಾಶಯಕ್ಕೆ ಬಿಡುವುದು ಹಾಗೂ ಎರಡನೇ ಹಂತದಲ್ಲಿ ಭದ್ರಾ ಜಲಾಶಯದಿಂದ ನೀರನ್ನು ಎತ್ತಿ ಗುರುತ್ವ ಕಾಲುವೆ ಮುಖಾಂತರ ಅಜ್ಜಂಪುರದ ಸುರಂಗದವರೆಗೆ ನೀರನ್ನು ಹರಿಸಿ ನಂತರ ಚಿತ್ರದುರ್ಗ ಶಾಖಾ ಕಾಲುವೆ ಮತ್ತು ತುಮಕೂರು ಶಾಖಾ ಕಾಲುವೆ ಮೂಲಕ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಯಂತಹ ಬರಪೀಡಿತ ಜಿಲ್ಲೆಗಳಿಗೆ ಒಟ್ಟಾರೆ 2,25,515 ಹೆಕ್ಟೆರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಅಳವಡಿಸಿ ನೀರಾವರಿ ಸೌಲಭ್ಯ ಒದಗಿಸಲು ಹಾಗೂ ಈ ಜಿಲ್ಲೆಗಳಲ್ಲಿನ ಬರಪೀಡಿತ ತಾಲ್ಲೂಕುಗಳ 367 ಕೆರೆಗಳಿಗೆ ನೀರನ್ನು ತುಂಬಿಸಲು ಯೋಜಿಸಲಾಗಿರುತ್ತದೆ. ಈ ಯೋಜನೆಯ ಪ್ರಾಥಮಿಕ ಉದ್ಧೇಶ ಮುಂಗಾರು ಋತುವಿನಲ್ಲಿ ಸುಸ್ಥಿರ ನೀರಾವರಿಯನ್ನು ಕಲ್ಪಿಸುವುದು ಹಾಗೂ ಅಂತರ್ಜಲ ಅಭಿವೃದ್ಧಿಪಡಿಸಿ ಅದರಲ್ಲಿನ ಪ್ರಧಾನವಾದ ಮತ್ತು ಹೆಚ್ಚಿನ ರಾಸಾಯನಿಕ ಕಲುಷಿತೆವಾಸ ಪ್ಲೋರೈಡ್ ಅಂಶವನ್ನು ಕಡಿಮೆಗೊಳಿಸುವುದು ಹಾಗೂ ಮೇಲೆ ತಿಳಿಸಿರುವ ಜಿಲ್ಲೆಗಳಲ್ಲಿನ ಬರಪೀಡಿತ ತಾಲ್ಲೂಕುಗಳಲ್ಲಿ 367 ಕೆರೆಗಳನ್ನು ತುಂಬಿಸಿ, ಕುಡಿಯುವ ನೀರನ್ನು ಒದಗಿಸುವುದಾಗಿರುತ್ತದೆ.

ಗಾಯತ್ರಿ ಜಲಾಶಯವನ್ನು 1963 ರಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕರಿಯಳ್ಳಿ ಗ್ರಾಮದ ಬಳಿ ಸುವರ್ಣಮುಖಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುತ್ತದೆ. ಈ ಜಲಾಶಯದ ಒಟ್ಟು ಉದ್ದ 1021.53 ಮೀ 9.55 ದಶಲಕ್ಷ ಘನಮೀ ಹಾಗೂ ಒಟ್ಟು ನೀರಿನ ಸಂಗ್ರಹಣಾ ಸಾಮರ್ಥ್ಯ 27.63 ದಶಲಕ್ಷ ಘನಮೀ (0.97 ಟಿ.ಎಂ.ಸಿ) ಇದ್ದು, ಇದರಲ್ಲಿ ಡೆಟ್ ಸಂಗ್ರಹಣಾ ಸಾಮರ್ಥ್ಯ 9.55 ದಶಲಕ್ಷ ಘನಮೀ (0.34 ಟಿ.ಎಂ.ಸಿ) ಮತ್ತು Live ಸಂಗ್ರಹಣಾ ಸಾಮರ್ಥ್ಯ 18.08 ದಶಲಕ್ಷ ಘನಮೀ 0.63 ಟಿ.ಎಂ.ಸಿ ಇರುತ್ತದೆ. ಇದರ ಒಟ್ಟು ಜಲಾವೃತ ಪ್ರದೇಶ 1831.00 ಚದರ ಕಿ.ಮೀ ಇರುತ್ತದೆ. ಸದರಿ ಯೋಜನೆಯು ಒಟ್ಟು 2305.00 ಹೆಕ್ಟೇರ್ಸ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿರುತ್ತದೆ.

ವಾಣಿ ವಿಲಾಸ ಸಾಗರ ಜಲಾಶಯವು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಾರಿಕಣವೆ ಹಳ್ಳಿಯ ಬಳಿ ವೇದಾವತಿ ನದಿಗೆ ಅಡ್ಡಲಾಗಿ 1987 ರಿಂದ 1907ರಲ್ಲಿ ನಿರ್ಮಾಣವಾಗಿರುತ್ತದೆ. ವೇದಾವತಿ ನದಿಯ ಕೃಷ್ಣಾ ನದಿಯ ಉಪನದಿಯಾಗಿರುತ್ತದೆ. ಚಿತ್ರದುರ್ಗ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವುದು ವಿವಿ ಸಾಗರ ಯೋಜನೆಯ ಮೂಲ ಉದ್ಧೇಶವಾಗಿರುತ್ತದೆ. 43.28 ಮಿ. ಎತ್ತರದ (142 ಜಿಣ) ಮತ್ತು 405.50 ಮೀ ಉದ್ದದ non-over flow ಅಣೆಕಟ್ಟು ನಿರ್ಮಾಣದ ಈ ಯೋಜನೆಯಿಂದ 25,000 ಏಕರೆ ಭೂಮಿಗೆ ನೀರಾವರಿಯನ್ನು ಒದಗಿಸಲಾಗಿದೆ. ಸದರಿ ಯೋಜನೆಯಲ್ಲಿ ನೀರಾವರಿಯನ್ನು ಮೇಲ್ಮಟ್ಟದ ಕಾಲುವೆ ಮುಖಾಂತರ ಹಾಗೂ ಜಲಾಶಯದಿಂದ 8 ಕಿ.ಮೀ ಕೆಳಭಾಗದಲ್ಲಿ ನಿರ್ಮಿಸಿರುವ ಕಾರ್ತಿಕೇಯನ ಹಳ್ಳಿ ಅಣೆಕಟ್ಟೆಯ ಎಡ ಹಾಗೂ ಬಲದಂಡೆ ಕಾಲುವೆಗಳ ಮೂಲಕ ಒದಗಿಸಲು ಯೋಜಿಸಲಾಗಿರುತ್ತದೆ.

ಭೇಟಿ ನೀಡಿ

ವಿವಿಧ ಯೋಜನೆಗಳ ಛಾಯಾಚಿತ್ರಗಳ ಗ್ಯಾಲರಿಗೆ ಭೇಟಿ ನೀಡಿ