ಉತ್ತರಹಳ್ಳಿ ಮುಖ್ಯರಸ್ತೆ ತುರಹಳ್ಳಿ ಗ್ರಾಮಕ್ಕೆ ಸೇರಿದ ಭಾರತ ಗೃಹ ನಿರ್ಮಾಣ ಸಹಕಾರ ಸಂಘದ ಬಡಾವಣೆಯಲ್ಲಿ ಸುಮಾರು 10000 ಚದರಡಿ ಅಳತೆಯ ನಾಗರೀಕ ಸೌಲಭ್ಯ ನಿವೇಶನವನ್ನು ಬೆಂ.ಅ.ಪ್ರಾ ಹಂಚಿಕೆ ಮಾಡಲಾಗಿದ್ದು. ಸದರಿ ನಿವೇಶನದಲ್ಲಿ ನಾಲ್ಕು ಅಂತಸ್ತಿನ 66 ಕೊಠಡಿಗಳುಳ್ಳ ಬೃಹತ್ ಕಟ್ಟಡವನ್ನು ಸುಮಾರು 4.5 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಗ್ರಾಮೀಣ ಪ್ರದೇಶದಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬರುವ ಸಮುದಾಯದ 200 ಬಡ ಹೆಣ್ಣುಮಕ್ಕಳ ಅನುಕೂಲಕ್ಕಾಗಿ ಮಹಿಳಾ ವಿದ್ಯಾರ್ಥಿನಿಲಯವನ್ನುಕಟ್ಟಲಾಗಿದೆ. ಈ ಶೈಕ್ಷಣಿಕ ವರ್ಷದಿಂದ 73 ವಿದ್ಯಾರ್ಥಿನಿಯರು ದಾಖಲಾಗಿದ್ದು ವಿದ್ಯಾರ್ಥಿನಿಲಯವು ಕಾರ್ಯನಿರತವಾಗಿದೆ.