ಇದುವರೆಗೆ ವೇದಿಕೆ ವತಿಯಿಂದ ಒಟ್ಟು 24 ವೈದ್ಯಕೀಯ ಶಿಬಿರಗಳನ್ನು ನಡೆಸಲಾಗಿದೆ. ನಗರ ಪ್ರದೇಶದ ಜನರಿಗೆ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳು ಗ್ರಾಮೀಣ ಪ್ರದೇಶದ ಬಡಜನರಿಗೂ ಲಭ್ಯವಾಗಲಿ ಎಂದು ಈ ಶಿಬಿರಗಳ ವ್ಯವಸ್ಥೆ ಈ ವರೆಗೂ 24 ವೈದ್ಯಕೀಯ ಶಿಬಿರಗಳನ್ನು ನಡೆಸಲಾಗಿದೆ. ಈ ಶಿಬಿರದಲ್ಲಿ ಕಿಮ್ಸ್, ಕೆಂಪಗೌಡ ದಂತ ವೈದ್ಯಕೀಯ ವೈದ್ಯರು, ಶ್ರೀ ಕಾಲಬೈರವೇಶ್ವರ ಆಯುರ್ವೇದಿಕೆ ಮಹಾವಿದ್ಯಾಲಯ, ಸ್ವಂದನ ನರ್ಸಿಂಗ್ ಹೋಂನ ವೈದ್ಯರು ಓಟ್ಟು ಸುಮಾರು 100 ಕ್ಕೂ ಹೆಚ್ಚು ಹಿರಿಯ, ನುರಿತ ವೈದ್ಯರು ಭಗವಹಿಸುವುದು ಈ ಶಿಬಿರದ ವಿಶೇಷ.
ಐ.ಎ.ಎಸ್/ಕೆ.ಎ.ಎಸ್ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಸ್ವರ್ಧಾತ್ಮಕ ಪರೀಕ್ಷೆಗೆ ಕೂರುವ ಅಭ್ಯರ್ಥಿಗಳಿಗೆ ಇದುವರೆಗೆ 21 ತಂಡಗಳಿಗೆ ತರಬೇತಿಯನ್ನು ವೇದಿಕೆ ವತಿಯಿಂದ ನೀಡಲಾಗಿದೆ.